ಅನುರೂಪತೆ

ಶಿಲಾಸ್ತರಗಳು ಅನುಕ್ರಮವಾಗಿ ಒಂದಾದ ಮೇಲೊಂದು ಕಂಡುಬರುವುದೇ ಅನುರೂಪತೆ (ಕನ್‍ಫಾರ್ಮಿಟಿ). ಈ ಕಾರಣ ಇವು ಒಂದು ನಿರ್ದಿಷ್ಟ ಭೂಕಾಲಮಾನದ ವಿವಿಧ ಹಂತಗಳ ಪ್ರತೀಕಗಳಾಗಿದ್ದು ಆ ಯುಗಗಳನ್ನು ಪ್ರತಿಬಿಂಬಿಸುತ್ತವೆ. ಅನುರೂಪಕತೆಯನ್ನು ತೋರುವ ಶಿಲಾಸಮುದಾಯದಲ್ಲಿ ವಯಸ್ಸಿನಲ್ಲಿ ಅತ್ಯಂತ ಹಳೆಯದಾದ ಶಿಲಾಸ್ತರ ತಳಭಾಗದಲ್ಲಿದ್ದು ಕ್ರಮೇಣ ಅದರ ಮೇಲೆ ಕಂಡುಬರುವ ಶಿಲಾಸ್ತರಗಳು ವಯಸ್ಸಿನಲ್ಲಿ ಕಿರಿಯವಾಗುತ್ತ ಕೊನೆಗೆ ಸಮುದಾಯದ ಮೇಲ್ಭಾಗದಲ್ಲಿ ಅತ್ಯಂತ ಕಿರಿಯಸ್ತರವನ್ನು ಕಾಣುತ್ತೇವೆ. ಸ್ತರಗಳ ನಡುವೆ ಯಾವಬಗೆಯ ಶೈಥಿಲ್ಯವೂ ಕಂಡುಬರುವುದಿಲ್ಲ. 

ಚಿತ್ರ-1

ಇದನ್ನು ಸಾಮಾನ್ಯವಾಗಿ ಜಲಜಶಿಲಾಸಮೂಹಗಳಲ್ಲಿ ಸುಲಭವಾಗಿ ಗುರುತಿಸಬಹುದು. ಪ್ರತಿ ಪದರವೂ ಮೇಲಣ ಪದರಕ್ಕಿಂತ ಹಿರಿದಾಗಿಯೂ ಕೆಳಗಣ ಪದರಕ್ಕಿಂತ ಕಿರಿದಾಗಿಯೂ ಇರುತ್ತದೆ. ಇದನ್ನೇ ಅನುಸರಿಸಿ ಭೂ ಇತಿಹಾಸದ ಅತಿ ಮುಖ್ಯ ನಿಯಮವಾದ ಶಿಲಾಸೇರಿಕೆಯ ಅನುಕ್ರಮವನ್ನು (ಆರ್ಡರ್ ಆಫ್ ಸೂಪರ್‍ಫೊಸಿóಷನ್) ರೂಪಿಸಲಾಗಿದೆ.
ಚಿತ್ರ 1ರಲ್ಲಿ ತೋರಿಸಿದಂತೆ ಂಯಿಂದ ಆರವರೆಗಿನ ಸ್ತರಗಳು ಒಂದು ನಿರ್ದಿಷ್ಟ ಭೂಕಾಲಮಾನಕ್ಕೆ ಸೇರಿದ ಅನುರೂಪಶಿಲೆಯವು. ನಡುವೆ ಯಾವ ತಡೆ ಆಥವಾ ಶೈಥಿಲ್ಯಕಂಡು ಬರದೆ ಇವು ಏಕಪ್ರಕಾರವಾಗಿ ಸಾಗರತಳದಲ್ಲಿ ಉಂಟಾದುವು. ಇವುಗಳ ಸಂಯೋಜನೆ, ಕಣರಚನೆ ಮತ್ತು ಜೀವಾವಶೇಷಗಳನ್ನು ಅಧ್ಯಯನ ಮಾಡಿದಾಗ ಇವುಗಳ ಅನುರೂಪತೆ ಮತ್ತಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ. ಅಂದರೆ ಈ ನಾಲ್ಕೂ ಸ್ತರಗಳು ಒಂದು ನಿರ್ದಿಷ್ಟ ಭೂಕಾಲಮಾನದ ನಾಲ್ಕು ವಿವಿಧಹಂತಗಳಲ್ಲಿ ಸಾಗರವೊಂದರ ತಳದಲ್ಲಿ ಯಾವ ತಡೆಯೂ ಇಲ್ಲದೆ ಏಕಪ್ರಕಾರವಾಗಿ ಒಂದಾದ ಮೇಲೊಂದು ಮೈದೋರಿದುವೆಂದು ಅರ್ಥ. ಅಲ್ಲದೆ ಈ ಕಾಲದುದ್ದಕ್ಕೂ ಆ ಭೂಪ್ರದೇಶದಲ್ಲಿ ಬಹುಮಟ್ಟಿಗೆ ಒಂದೇ ತೆರನಾದ ಅಥವಾ ಅಷ್ಟು ಏರುಪೇರಿಲ್ಲದ ಭೂಪರಿಸ್ಥಿತಿ ಇದ್ದಿತೆಂದೂ ಉಹಿಸಬಹುದು.

ಈ ಅನುರೂಪ ಶಿಲಾಸಮುದಾಯದಲ್ಲಿ ತಳಭಾಗದ ಂಸ್ತರ ವಯಸ್ಸಿನಲ್ಲಿ ಅತ್ಯಂತ ಹಿರಿಯದು. ಆಸ್ತರ, ಶಿಲಾಪೇರಿಕೆಯ ಅನುಕ್ರಮ ಸಿದ್ಧಾಂತಕ್ಕನುಗುಣವಾಗಿ ಅತ್ಯಂತ ಕಿರಿಯದು. ಹೀಗೆಯೇ ಃಸ್ತರ ಂಗಿಂತ ಕಿರಿಯದಾಗಿಯೂ ಅಗಿಂತ ಹಿರಿಯದಾಗಿಯೂ ಆಗುತ್ತದೆ. ಈ ಮೂಲಭೂತ ತತ್ತ್ವವನ್ನು ಭೂವಿಜ್ಞಾನಿಗಳು ವಿವಿಧ ಪ್ರದೇಶಗಳಲ್ಲಿರುವ ಶಿಲಾಸಮೂಹಗಳ ಅಧ್ಯಯನದಲ್ಲಿ ಅದರಲ್ಲೂ ಅವುಗಳ ವಯೋನಿರ್ಧಾರದಲ್ಲಿ ಉಪಯೋಗಿಸಿಕೊಂಡಿದ್ದಾರೆ.   			(ಬಿ.ಎ.ಜಿ.)

ಅನನುರೂಪತೆ : ಒಂದು ನಿಶ್ಚಿತ ಅವಧಿಯಲ್ಲಿ ಶೇಖರವಾದ ಸ್ತರಗಳು ಸಾಮಾನ್ಯವಾಗಿ ಸಮಾನಾಂತರ ಮತ್ತು ಮಟ್ಟಸವಾಗಿರುತ್ತವೆ. ಇವು ಆಮೇಲೆ ಬಾಗಿ ಮಡಿಕೆ ಮಡಿಕೆಯಾಗಿದ್ದು ಸ್ತರಭಂಗ ಮೊದಲಾದ ರಚನೆಗಳನ್ನು ತೋರಬಹುದು. ಸಮಾನಾಂತರಸ್ತರಗಳು ಅವು ಉತ್ಪನ್ನವಾದ ಜಲಾಶಯದಲ್ಲಿಯೇ ಮುಳುಗಿರುವವರೆಗೆ ವಿರೂಪಗೊಳ್ಳುವುದಿಲ್ಲ. ಅವು ಎತ್ತರಿಸಲ್ಪಟ್ಟು ಭೂಮಿಯ ಭಾಗವಾಗಿ ಸೇರಿದೊಡನೆ ಅವುಗಳ ತೇಮಾನ ಸವೆತ, ಕ್ಷಯ ಮೊದಲಾಗುತ್ತವೆ. ಬಹುಕಾಲದ ಮೇಲೆ ಅವುಗಳ ಮೇಲೆ ನೀರು ನುಗ್ಗಿ ಬಂದು ಹೊಸ ಶಿಲೆಗಳು ಶೇಖರವಾಗಬಹುದು. ಹೀಗೆ ಬೆಳೆಯುವ ಎರಡನೆ ಸ್ತರಗಳ ಸಮೂಹ, ಸವೆಯದೆ ಉಳಿದಿರುವ ಮೊದಲಿನ ಸ್ತರಗಳ ಸಮೂಹ ಪರಸ್ಪರ ಅನನುರೂಪವಾಗಿದೆ. ಇವುಗಳನ್ನು ಬೇರ್ಪಡಿಸುವ ವಕ್ರವಲಯಕ್ಕೆ ಅನನುರೂಪತೆ (ಅನ್‍ಕನ್‍ಫಾರ್ಮಿಟಿ) ಎಂಬ ಹೆಸರಿದೆ. ಇದರ ವ್ಯಾಪ್ತಿ ಅತ್ಯಲ್ಪ ಪ್ರದೇಶಕ್ಕೆ ಸೀಮಿತಗೊಂಡಿದ್ದರೆ ಅದನ್ನು ಸ್ಥಳೀಯ ಅನನುರೂಪತೆಯೆಂದೂ ವಿಶಾಲಪ್ರದೇಶಕ್ಕೆ ಹಬ್ಬಿದ್ದರೆ ಅದನ್ನು ಪ್ರಾದೇಶಿಕ ಅನನುರೂಪತೆಯೆಂದೂ ಕರೆಯುತ್ತಾರೆ. ಬೇರ್ಪಡಿಸಿದ ಎರಡು ಸ್ತರಸಮೂಹಗಳ ಕಾಲಾಂತರಸೂಚಿ ಅನನುರೂಪತೆ.
ಅನನುರೂಪತೆಯಲ್ಲಿ ಎರಡು ವಿಧ. ಓರೆಯಾಗಿರುವ ಪದರಗಳ (ಟಿಲ್ಟೆಡ್ ಬೆಡ್ಸ್) ಮೇಲೆ ಅನನುರೂಪತೆ ವ್ಯಾಪಿಸಿ ಎರಡು ಸ್ತರಸಮೂಹಗಳನ್ನು ಪ್ರತ್ಯೇಕಿಸಿದರೆ ಅದಕ್ಕೆ ಅಸಾರೂಪ್ಯ (ನಾನ್‍ಕನ್‍ಫಾರ್ಮಿಟಿ) ಅಥವಾ ಕೋನೀಯ ಅನನುರೂಪತೆ (ಆ್ಯಂಗ್ಯುಲರ್ ಅನ್‍ಕನ್‍ಫಾರ್ಮಿಟಿ) ಎಂದು ಕರೆಯುತ್ತಾರೆ.

ಚಿತ್ರ-2-ಮತ್ತು-3

ಚಿತ್ರ 2ರಲ್ಲಿ ಕಾಣಿಸಿರುವ ಂ ಮತ್ತು ಃ ಸ್ತರಸಮೂಹಗಳು ಓರೆಯಾದ ಪದರಗಳ ಮೇಲಿವೆ. ಆದ್ದರಿಂದ ಇಲ್ಲಿರುವ ಅನನುರೂಪತೆ ಅ ಅಸಾರೂಪ್ಯಕ್ಕೆ ನಿದರ್ಶನ. P ಪದರಗಳು ಪರಸ್ಪರ ಸಮಾನಾಂತರವಾಗಿರಬಹುದು. ಚಿತ್ರ 3ರಲ್ಲಿರುವ ಂ ಮತ್ತು ಃಸ್ತರಸಮೂಹಗಳನ್ನು ಬೇರ್ಪಡಿಸುವ ಅನನುರೂಪತೆಯ ಹೆಸರು ಅಸಂಗತಿ (ಡಿಸ್‍ಕನ್‍ಫಾರ್ಮಿಟಿ). 

(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ